
ಜೋಯಿಡಾ: ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ತಾಲ್ಲೂಕಿನ ಅನಮೋಡ ಬಳಿ ನಡೆದಿದೆ. ನಾಗೇಂದ್ರ(25) ಮೃತ ದುರ್ದೈವಿ ಯುವಕನಾಗಿದ್ದಾನೆ.
ಬೆಳ್ಳಂಬೆಳಿಗ್ಗೆ ಯುವಕ ಬೈಕ್ ಮೂಲಕ ಕೆಲಸದ ನಿಮಿತ್ತ ಜೋಯಿಡಾದತ್ತ ಹೊರಟಿದ್ದ ಎನ್ನಲಾಗಿದ್ದು, ರಸ್ತೆ ತಿರುವಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಹೆಲ್ಮೆಟ್ ಧರಿಸಿದ್ದರೂ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ರಸ್ತೆ ಮೇಲೆ ದೇಹ ತಿಕ್ಕಿಕೊಂಡು ಹೋಗಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿದ್ದು, ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಸ್ಥಳೀಯ ವಾಹನ ಸವಾರರು ಅಪಘಾತ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.