ರಾಮನಗರ: ಧಾರವಾಡದಿಂದ ಗೋವಾದ ಅಮೋನಾಕ್ಕೆ ಮ್ಯಾಂಗನೀಸ್ (ಸ್ಪಂಜ್) ಸಾಗಿಸುತ್ತಿದ್ದ 14 ಚಕ್ರದ ಟ್ರಕ್‌ವೊಂದು ಬ್ರೇಕ್ ಫೇಲ್ ಆಗಿ ಅನಮೋಡ್ ಘಾಟ್‌ನಲ್ಲಿ ಮೇಲಿನ ರಸ್ತೆಯಿಂದ ಕೆಳಗಿನ ರಸ್ತೆಗೆ ಉರುಳಿ ಬಿದ್ದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಗೋವಾ ಗಡಿಯ ದೂಧ್‌ಸಾಗರ್ ದೇವಸ್ಥಾನದ ಮೇಲ್ಭಾಗದ ರಸ್ತೆಯಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ಈ ಅಪಘಾತ ಸಂಭವಿಸಿದೆ. ಟ್ರಕ್ ನೇರವಾಗಿ ಕೆಳಗಿನ ರಸ್ತೆಯಲ್ಲಿರುವ ದೂಧ್‌ಸಾಗರ್ ದೇವಸ್ಥಾನದ ಮುಂದೆ ಬಂದು ಬಿದ್ದಿದೆ.
ಚಾಲಕನಿಗೆ ಗಾಯ:
ಅಪಘಾತದಲ್ಲಿ ಚಾಲಕ ಇಜಾಜ್ ಅಹ್ಮದ್ (40, ಲೋಂಡಾ ನಿವಾಸಿ) ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗೋವಾ ಗಡಿಯ 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರಕ್‌ನಲ್ಲಿದ್ದ ಮಾಲೀಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಾಹನಕ್ಕೆ ಭಾರೀ ಹಾನಿಯಾಗಿದೆ. ಅಪಘಾತದಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಬೆಳಿಗ್ಗೆ 6 ಗಂಟೆಗೆ ಫೋಂಡಾದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂಬಂಧ ಕುಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


