ಕಾರವಾರ: ಕದ್ರಾ ಜಾತ್ರೆಗೆ ಆಗಮಿಸಿದ್ದ ಯುವಕರ ನಡುವೆ ಬೈಕ್ ಕೀ ವಿಚಾರಕ್ಕೆ ನಡೆದ ವಾಗ್ವಾದ ಗುಂಪು ಘರ್ಷಣೆಗೆ ತಿರುಗಿ, ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ನಡೆದಿದೆ.

ಗಣೇಶ ಎಂಬ ಯುವಕ ಗಾಯಗೊಂಡಿದ್ದು, ಕುಡಿದ ಮತ್ತಿನಲ್ಲಿ ಯುವಕರ ಗುಂಪಿನ ನಡುವೆ ಬೈಕ್ ಕೀ ವಿಚಾರವಾಗಿ ಜಗಳ ಆರಂಭವಾಗಿ ಬಳಿಕ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಣೇಶನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.