ಕಾರವಾರ: ಬೈಕ್ ಓಡಿಸುವುದಕ್ಕಿಂತ ಶಬ್ದ ಮಾಡಿಸುವುದೇ ಕೆಲ ಯುವಕರಿಗೆ ಕ್ರೇಜ್! ಆದರೆ ಈ ಶಬ್ದದ ಕಿರಿಕಿರಿ ಅನುಭವಿಸುತ್ತಿದ್ದ ಸಾರ್ವಜನಿಕರಿಗೆ ಕಾರವಾರ ಸಂಚಾರಿ ಪೊಲೀಸರು ಕೊನೆಗೂ ಸಮಾಧಾನ ನೀಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಅತಿಯಾದ ಶಬ್ದ ಹೊರಸೂಸುತ್ತಿದ್ದ ಮೋಡಿಫೈಡ್ ಸೈಲೆನ್ಸರ್ ಅಳವಡಿಸಿದ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದು, ಸೈಲೆನ್ಸರ್‌ಗಳನ್ನು ತೆರವುಗೊಳಿಸಿದ್ದಾರೆ. ಯುವಕರಿಗೆ ಬೈಕ್‌ನ ಶಬ್ದವೇ ಸ್ಟೈಲ್ ಆಗಿರಬಹುದು; ಸಾರ್ವಜನಿಕರಿಗೆ ಅದೇ ಕಿರಿಕಿರಿ ಎಂಬುದನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಮನವರಿಕೆ ಮಾಡಿದ್ದಾರೆ.
ಕಾರವಾರ ಸಂಚಾರಿ ಠಾಣೆಯ ಪಿಎಸ್‌ಐಗಳಾದ ಶ್ರೀಕಾಂತ ರಾಥೋಡ್ ಹಾಗೂ ಪರುಷರಾಮ್ ಸೊಲ್ಲಾಪುರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ. ಶ್ರೀಶೈಲ್, ಬೆನಕ ನಾಯಕ, ಪ್ರವೀಣ ಪಿ. ಮತ್ತು ನಾಗಪ್ಪ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೋಡಿಫೈಡ್ ಸೈಲೆನ್ಸರ್‌ಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.


