ನವದೆಹಲಿ: ಒಮಾನ್‌ನ ಸೋಹಾರ್ ಆಂಕರೇಜ್‌ನಲ್ಲಿ ಭಾನುವಾರ ಡ್ರೋನ್ ದಾಳಿಗೆ ಒಳಗಾದ ಟ್ಯಾಂಕರ್‌ನಲ್ಲಿದ್ದ 11 ಮಂದಿ ಭಾರತೀಯ ಸಿಬ್ಬಂದಿಗಳ ಪೈಕಿ ಇಬ್ಬರು ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ಒಂಬತ್ತು ಸಿಬ್ಬಂದಿಗಳನ್ನು ರಕ್ಷಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ, ಆದರೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಎಂಟಿ ಪೆಟ್ರೋ ಡಾಲ್ಫಿನ್ ಹೆಸರಿನ ಟ್ಯಾಂಕರ್ ಅಕ್ಟೋಬರ್ 11 ರಂದು ದಾಳಿಗೆ ಒಳಗಾಗಿತ್ತು ಮತ್ತು ನಾಪತ್ತೆಯಾದ ನಾವಿಕರನ್ನು ಪತ್ತೆಹಚ್ಚಲು ಭಾರತೀಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಸೋನೋವಾಲ್ ಹೇಳಿದ್ದಾರೆ.