ಜೊಯಿಡಾ: ತಾಲೂಕಿನ ಬಿಜಿವಿಎಸ್ ಕಾಲೇಜು ವಿದ್ಯಾರ್ಥಿನಿ ನಾಗೋಡಾ ಕ್ರಾಸ್ ಬಳಿ ಇರುವ ಬಸ್ ತಂಗುದಾಣ ಉರುಳಿ ಬಿದ್ದ ಕಾರಣ ಕಾಲು ಮುರಿದುಕೊಂಡ ವಿದ್ರಾವಕ ಘಟನೆ ನಡೆದಿದೆ. ಪ್ರಥಮ ಚಿಕಿತ್ಸೆಗೆ ಜೊಯಿಡಾ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಪರದಾಡುವಂತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜೊಯಿಡಾ ಕೇಂದ್ರದ ಬಿಜಿವಿಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸ್ವಾತಿ ಕೃಷ್ಣ ಕುಣಬಿ (17) ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿದ್ದಾಳೆ. ಬುಧವಾರ ಬಿಜಿವಿಎಸ್ ಕಾಲೇಜು ಜೊಯಿಡಾದ ವಿದ್ಯಾರ್ಥಿಗಳು ಎಲ್ಲರೂ ಪಿಕ್ನಿಕ್ ಹೋಗಿದ್ದಾರೆ. ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ 34 ಪಕ್ಕದ ನಾಗೋಡಾ ಕ್ರಾಸ್ ನಲ್ಲಿ ಅಭಿವೃದ್ಧಿ ಪಥ ಹೆಸರಿನಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ವಿಧ್ಯಾರ್ಥಿನಿ ಸ್ವಾತಿ ಸಹಪಾಠಿಗಳೊಂದಿಗೆ ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಬಸ್ ತಂಗುದಾಣ ಏಕಾಏಕಿ ಉರುಳಿ ಬಿದ್ದು ತಪ್ಪಿಸಲು ಪ್ರಯತ್ನಿಸದ ವಿದ್ಯಾರ್ಥಿಯ ಕಾಲು ಸಿಲುಕಿದೆ. ಬಲ ಕಾಲು ಮುರಿದಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ

ಜೊಯಿಡಾ ತಾಲೂಕು ಆಸ್ಪತ್ರೆಯಲ್ಲಿ ಎಲುಬು ಕೀಳು ವೈದ್ಯರು ಇಲ್ಲದೇ ಪ್ರಥಮ ಚಿಕಿತ್ಸೆಗೆ ಮಾತ್ರ ಆಸ್ಪತ್ರೆ ಸೀಮಿತವಾಗಿದೆ. ಇರುವ ವೈದ್ಯರು ವರ್ಗಾವಣೆಗೊಂಡಿದ್ದಾರೆ. ಹುದ್ದೆ ಖಾಲಿ ಇದೆ. ಬಾಣಂತಿಯರ ಪಾಡು ಹೊರತಾಗಿಲ್ಲ, ಕೇವಲ ಕಾಟಾಚಾರಕ್ಕೆ ಮಾತ್ರ ಆಸ್ಪತ್ರೆಯಾಗಿದ್ದು. ರೋಗಿಗಳ ಪಾಲಿಗೆ ನರಕ ತೋರಿಸುವ ದವಾಖಾನೆಯಾಗಿದೆ.

ನಿರ್ವಹಣೆ ಯಾರ ಹೊಣೆ

ಅಭಿವೃದ್ಧಿ ಪಥ ಹೆಂಗ ತಾಲೂಕಿನ ಅನೇಕ ಕಡೆ ಇಂತಹ ಬಸ್ ತಂಗುದಾಣಗಳು ಇವೆ. ಈ ತಂಗುದಾಣ ರೀಪೇರಿ ಇಲಾಲದೇ ಅನಾಹುತಕ್ಕೆ ಕಾರಣ ಆಗುತ್ತದೆ. ಅನೇಕ ಬಸ್ ನಿಲ್ದಾಣದಲ್ಲಿ ಆಸನ ಸರಿಯಿಲ್ಲ . ಮೇಲ್ಛಾವಣಿಗೆ ಹಾಕಿದ ಸೀಟು, ಕಬ್ಬಿಣದ ಕಂಬಗಳು ತುಕ್ಕು ಹಿಡಿದಿದೆ. ನೆಲೆಗಟ್ಟು ಇಲ್ಲ, ಹೀಗಾಗಿ ಬಿದ್ದು ಜೀವ ಹಾನಿಯಾಗುವ ಸಾಧ್ಯತೆ ಇದೆ. ನಿರ್ವಹಣೆ ಯಾರ ಹೊಣೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ..