ಕಾರವಾರ: ಶಾಸಕ ಸೈಲ್ ಗೆ ಅಧಿಕಾರಕ್ಕೆ ಬಂದಾಗಲೆಲ್ಲ ಕಾಡುವ ಅದಿರು ನಾಪತ್ತೆ ಪ್ರಕರಣ, ಸತೀಶ ಸೈಲ್ ಇನ್ನೊಮ್ಮೆ ಜೈಲು ಸೇರುವ ಸಾಧ್ಯತೆ ಇದೆ.
ಅದಿರು ನಾಪತ್ತೆ ಪ್ರಕರಣಕ್ಕೆ ಸಂಭಂಧಪಟ್ಟಂತೆ ಶಾಸಕ ಸತೀಶ್ ಸೈಲ್ ದೋಷಿ ಎಂದಹ ನ್ಯಾಯಾಲಯ ಆದೇಶಿಸಿದೆ.
ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಆದೇಶ ಮಾಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ
ಆರೋಪಿತರನ್ನು ಪೊಲೀಸ್ ಕಷ್ಟಡಿಗೆ ಪಡೆಯದಂತೆ ಸತೀಶ್ ಸೈಲ್ ಪರ ವಕೀಲರು ಮನವಿ ಮಾಡಿದ್ದಾರೆ.
ಆದರೆ ತೀರ್ಪು ನೀಡಿದ ಮೇಲೆ ಯಾವುದಕ್ಕೂ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಹಾಗು ತಕ್ಷಣ ಶಾಸಕರನ್ನು ವಶಕ್ಕೆ ಪಡೆಯಲು ಸೂಚಿಸಲಾಗಿದೆ.
ಸತೀಶ ಸೈಲ್ ರವರು ಶಾಸಕರಾಗಿದ್ದಾಗ ಮಾತ್ರ ಅದಿರು ನಾಪತ್ತೆ ಪ್ರಕರಣಕ್ಕೆ ಸಂಭಂಧ ಪಟ್ಟಂತೆ ಸೇರೆಮನೆ ವಾಸ ಅನುಭವಿಸಬೇಕಾಗಿ ಆದೇಶವಾಗುತ್ತದೆ. ಸೈಲ್ ಗೆ ಶಾಸಕ ಸ್ಥಾನ ಪನೌತಿಯಂತಾಗಿದೆ. ಕಳೆದ ಬಾರಿ ಸೈಲ್ ಶಾಸಕರಾಗಿದ್ದಾಗಲೇ ಸುಮಾರು ಎರಡು ವರ್ಷಗಳ ಕಾಲ ಇದೇ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದರು. ಇಗ ಮತ್ತೆ ಆದೇಶವಾಗಿರುವುದು ಕಾರವಾರ ಅಂಕೋಲಾ ಕ್ಷೇತ್ರ ಮತ್ತೆ ಅನಾಥವಾಗುವ ಸಾಧ್ಯತೆ ಇದೆ.