ಕಾರವಾರ: ನಗರದ ಫುಟ್‌ಪಾತ್‌ನಲ್ಲಿ ಕಲ್ಲಿನ ಶಿವಲಿಂಗವೊಂದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ.

ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ವಾರ್ತಾ ಭವನದ ಮುಂಭಾಗದ ಸರ್ವಿಸ್ ರಸ್ತೆಯ ಫುಟ್‌ಪಾತ್ ಬದಿಯಲ್ಲಿ ಈ ಶಿವಲಿಂಗವನ್ನು ಇಡಲಾಗಿದೆ. ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸ್ಥಳೀಯರ ಗಮನಕ್ಕೆ ಈ ಶಿವಲಿಂಗ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ಜನರು ಸೇರಿದ್ದಾರೆ.

ಯಾರೋ ಭಕ್ತರು ರಾತ್ರಿ ವೇಳೆ ತಂದು ಇಟ್ಟಿರಬಹುದು ಅಥವಾ ನಿರ್ಮಾಣ ಕಾಮಗಾರಿ ವೇಳೆ ಸಿಕ್ಕಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಸದ್ಯ ಈ ಶಿವಲಿಂಗದ ದರ್ಶನಕ್ಕೆ ಜನರು ಬರುತ್ತಿದ್ದಾರೆ.

ಈ ಬಗ್ಗೆ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕಿದೆ.