ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರ ತೀರ್ಮಾನ ಗೌರವಿಸುತ್ತೇವೆ.
ಸಿಎಂ ರಾಜೀನಾಮೆ ನೀಡಬೇಕು;ಕಾಗೇರಿ
ಕಾರವಾರ:
ಜಮ್ಮು-ಕಾಶ್ಮೀರ, ಹರಿಯಾಣ ಫಲಿತಾಂಶ ವಿಚಾರವಾಗಿ ಪೂರ್ಣ ವಿಶ್ಲೇಷಣೆಗೆ ಹೋಗುವುದುಲ್ಲ. ಪೂರ್ಣ ಫಲಿತಾಂಶ ಇನ್ನು ಬರಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಆಗಮಿಸಿದ ಸಂಸದ ಕಾಗೇರಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿಗೆ ಹಿನ್ನಡೆ ಇದೆ, ಆದರೂ ಪೂರ್ಣ ಫಲಿತಾಂಶ ಬರಬೇಕಿದೆ.ಏನೂ ಇದ್ದರೂ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ಕೊಟ್ಟ ತೀರ್ಮಾನವನ್ನ ಗೌರವದಿಂದ ಸ್ವೀಕರಿಸುತ್ತೇವೆ ಎಂದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ವಿಚಾರ ಮಾತನಾಡಿದ ಅವರು
ಸಿಎಂ ಸಿದ್ಧರಾಮಯ್ಯ ಈಗಲೇ ರಾಜೀನಾಮೆ ಕೊಡಬೇಕು ಎನ್ನುವ ಜನಾಭಿಪ್ರಾಯ ರೂಪಿತವಾಗಿದೆ.
ತನಿಖೆಗೆ ಯಾವುದೇ ಪ್ರಭಾವ ಬೀರದಂತೆ ಸಹಕರಿಸೋದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ವಿರುದ್ಧ ತನಿಖೆ ನಡೆಸುವುದು ಅಧಿಕಾರಿಗಳಿಗೆ ಒತ್ತಡ ಉಂಟಾಗುತ್ತದೆ.
ಅಧಿಕಾರಿಗಳು ಒತ್ತಡದಿಂದ ಹೊರಗಿದ್ದು ಕೆಲಸ ಮಾಡುವುದು ಕಷ್ಟಸಾಧ್ಯವಾದದ್ದು, ಹೀಗಾಗಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡಿ ರಾಜ್ಯದ ಗೌರವ ಎತ್ತಿ ಹಿಡಿಯಬೇಕು.
ಪ್ರಜಾಪ್ರಭುತ್ವದ, ಸಂವಿಧಾನದ ಶ್ರೇಷ್ಠ ಹುದ್ದೆಯಲ್ಲಿರುವ ರಾಜ್ಯಪಾಲರ, ನ್ಯಾಯಾಂಗದ ನಿರ್ಣಯವನ್ನ ಗೌರವಿಸಬೇಕು.
ಎಂಸು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದರು.