ಕಾರವಾರ: ಜನರ ಸಂಪರ್ಕಕ್ಕೆ ಬಾರದ ತಹಶಿಲ್ದಾರ್ ಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ , ಹಳಿಯಾಳ ಶಾಸಕ
ಆರ್ ವಿ ದೇಶಪಾಂಡೆಯವರು ತರಾಟೆಗೆ ತೆಗೆದುಕೊಂಡರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಹಶೀಲ್ದಾರ ಶಂಕರ ಗೌಡಿಗೆ ಫೋನ್ ಕಾಲ್ ಮಾಡಿ ಮಾಯನಾಡಿದ ದೇಶಪಾಂಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ಆರ್ ವಿ ದೇಶಪಾಂಡೆಯವರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂಡಗೋಡ ತಾಲೂಕಿನ ನಾಗರಿಕರು ತಮ್ಮ ಸಮಸ್ಯೆ ಹೇಳಿಕೊಂಡರು. ಆದರೆ ಈ ಸಂದರ್ಭದಲ್ಲಿ ತಹಶೀಲ್ದಾರ ಸ್ಥಳಕ್ಕೆ ಬಾರದಿರುವುದರಿಂದ ಆಕ್ರೋಶಗೊಂಡ ದೇಶಪಾಂಡೆಯವರು ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನೇನು ದನ ಕಾಯಲು ಬಂದಿದ್ದೀನಾ? ಕಂದಾಯ ಸಚಿವರಿಗೆ ದೂರು ಕೊಡುತ್ತೇನೆ. ಜನರು ಸಮಸ್ಯೆ ತನ್ನ ಬಳಿ ಹೇಳುತ್ತಿದ್ದಾರೆ. ನೀವು ಸ್ಥಳದಲ್ಲಿ ಇರಬೇಕಿತ್ತು ಎಂದು ದೇಶಪಾಂಡೆಯವರು ಗದರಿಸಿದರು.