ಅಕ್ರಮ ಗೋವಾ ಸಾರಾಯಿ ಸಾಗಾಟ ಯತ್ನ: ಅನಮೋಡ ಚೆಕ್ ಪೋಸ್ಟ್‌ನಲ್ಲಿ ವಶ
ಅಕ್ರಮ ಗೋವಾ ಸಾರಾಯಿ ಸಾಗಾಟ ಯತ್ನ: ಅನಮೋಡ ಚೆಕ್ ಪೋಸ್ಟ್‌ನಲ್ಲಿ ವಶ
ಅಕ್ರಮ ಗೋವಾ ಸಾರಾಯಿ ಸಾಗಾಟ ಯತ್ನ: ಅನಮೋಡ ಚೆಕ್ ಪೋಸ್ಟ್‌ನಲ್ಲಿ ವಶ
ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ನಡೆದಿದೆ.
ಈಚರ್ ಪ್ರೋ ಲಾರಿ ನೊಂದಣಿ ಸಂಖ್ಯೆ KA 01 AE 0704 ನ್ನು ತಪಾಸಣೆ ಮಾಡಿದಾಗ, ಅದರ ಕ್ಯಾಬಿನ್ ಒಳಗಡೆ 5 ರಟ್ಟಿನ ಪೆಟ್ಟಿಗೆಗಳಲ್ಲಿ 33 ಲೀಟರ್ ವಿಸ್ಕಿಯ ಬಾಟಲಿಗಳು ಹಾಗೂ ಒಂದು ರಟ್ಟಿನ್ ಪೆಟ್ಟಿಗೆಯಲ್ಲಿ 5.280 ಲೀಟರ್ ಬಿಯರ್ ಮತ್ತು ವಾಹನದ ಕ್ಯಾಬಿನ್ ಮೆಲ್ಬಾಗದಲ್ಲಿ ಪ್ಲಾಸ್ಟಿಕ್ ಚೀಲದ ಅಡಿಯಲ್ಲಿ ಮುಚ್ಚಿ ಅಕ್ರಮವಾಗಿ 12 ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟು 68.640 ಲೀಟರ್ ಬಿಯರನ್ನು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ.
ಸಾಗಾಟಕ್ಕೆ ಬಳಸಿದ್ದ ವಾಹನ ಹಾಗೂ ಮದ್ಯದ ಮತ್ತು ಬಿಯರ್ ಬಾಟಲಿಗಳ ಪೆಟ್ಟಿಗೆಗಳನ್ನು ಜಪ್ತುಪಡಿಸಿ ಆರೋಪಿಯಾದ ಮುಕೇಶ ಬನ್ಸರೂಪ ಸಿಂಗ್ ಸೇಮ್ರಾದ ಕೊಯಿರಾವುನ ಎಸ್.ಆರ್.ಎನ್ ಗ್ಯಾನಪುರ್ ಜಿಲ್ಲೆ ರವಿದಾಸ್ ನಗರ್ ಬದೋಯಿ, ಉತ್ತರಪ್ರದೇಶ ರಾಜ್ಯ, ಈತನನ್ನು ದಸ್ತಗಿರ್ ಮಾಡಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಬೆಲೆ ರೂ.15 ಲಕ್ಷ ರೂ.ಗಳಾಗಿದ್ದು, ಮದ್ಯದ ಅಂದಾಜು ಬೆಲೆ 2.50 ಲಕ್ಷ ರೂ. ಗಳಾಗಿರುತ್ತವೆ.
ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಮತ್ತು ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ, ರವರ ಮಾರ್ಗದರ್ಶನ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಸೂಚನೆಯ ಮೇರೆಗೆ ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಅಬಕಾರಿ ಸಿಪಿಐ ಟಿ.ಬಿ.ಮಲ್ಲಣ್ಣನವರ, ಸಿಬ್ಬಂದಿಗಳಾದ ಮಹಾಂತೇಶ ಹೊನ್ನೂರ, ಸದಾಶಿವ ರಾಥೋಡ, ರವಿ ಸಂಕಣ್ಣನವರ, ಬಸವರಾಜ್ ಗಡ್ಡೆನ್ನವರ ಕಾರ್ಯಾಚರಣೆಯಲ್ಲಿ ಇದ್ದರು.