Uncategorized
ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಜೈಲು, 22 ಸಾವಿರ ದಂಡ ವಿಧಿಸಿ ತೀರ್ಪು
ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಜೈಲು, 22 ಸಾವಿರ ದಂಡ ವಿಧಿಸಿ ತೀರ್ಪು

ಶಿರಸಿ: ವ್ಯಕ್ತಿಯೊರ್ವನಿಗೆ ಚಾಕು ಬಳಸಿ ಕೊಲೆಮಾಡಲು ಯತ್ನಿಸಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶರಾದ ಕಿರಣ ಕಿಣಿ ಇವರು ಕೊಲೆಗೆ ಯತ್ನಿಸಿದ್ದ ಆರೋಪಿ ಬನವಾಸಿಯ ದೊಡ್ಡಕೇರಿಯ ಆರೋಪಿ ದಿನೇಶ ಅಶೋಕ ಚನ್ನಯ್ಯ ಈತನಿಗೆ 10 ವರ್ಷ ಸಾದ ಕಾರಗೃಹ ಶಿಕ್ಷೆ, 22 ಸಾವಿರ ರೂ ದಂಡ ಹಾಗು ಹಲ್ಲೆಗೊಳಗಾದ ಯೋಗೇಶ ಈರಪ್ಪ ಚನ್ನಯ್ಯ ಇವರಿಗೆ 10 ಸಾವಿರ ರೂ ಪರಿಹಾರ ನೀಡಲು ತೀರ್ಪು ನೀಡಿದ್ದಾರೆ.
ಈ ಪ್ರಕರಣ 12-07-2022 ರಂದು ನಡೆದಿತ್ತು.ಈ ಪ್ರಕರಣದ ಬಗ್ಗೆ ಸರಕಾರಿ ಅಭಿಯೋಜಕರಾದ ರಾಜೇಶ ಎಂ ಮಳಗಿಕರ್ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದ್ದರು. ಅಂದಿನ ಬನವಾಸಿ ಠಾಣೆ ಪಿಎಸ್ಆಯ್ ಗಳಾದ ಹನುಮಂತ ಬಿರಾದಾರ ಹಾಗು ಚಂದ್ರಕಲಾ ಪತ್ತಾರ್ ತನಿಖೆ ಕೈಗೊಂಡು ದೋಶಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.