ಕಾರವಾರ: ಕಾರು ಪಲ್ಪಿಯಾಗಿ ಚಾಲಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಾಳಿ ಕ್ರಾಸ್ ಸಮೀಪ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಚಿತ್ತಾಕುಲಾ ಗ್ರಾಮ ಪಂಚಾಯತಿಗೆ ಒಳಪಡುವ ಹೊಸಾಳಿ ಕ್ರಾಸ್ ಸಮೀಪದ ಪೆಟ್ರೋಲ್ ಪಂಪ್ ಎದುರು ಸೋಮವಾರ ಮಧ್ಯ ರಾತ್ರಿ ಸಂಭವಿಸಿದ ಕಾರ್ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದಾನೆ.
ಮೃತ ಪಟ್ಟಿರುವ ವ್ಯಕ್ತಿ Port Colony ಸಮೀಪದ ನಿವಾಸಿ ರಾಹುಲ ಸುಹಾಸ ಕಿಂದಳಕರ(31) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಹಳಿಯಾಳದಿಂದ ಬರುತ್ತಿರುವಾಗ ರಾತ್ರಿ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರ್ ಪಲ್ಟಿಯಾಗಿದ್ದು ಕಾರ್ ಚಾಲನೆ ಮಾಡುತ್ತಿದ್ದ ರಾಹುಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಪಘಾತ ಸಂಭವಿಸಲು ನಿಖರವಾದ ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ಗೋವಾದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಾಹುಲ್ ಕಳೆದ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು.
ಸೋಮವಾರ ತಾನು ಹಳಿಯಾಳ ಹೋಗಿ ಬರುವುದಾಗಿ ಹೇಳಿ ತನ್ನ ಗೆಳೆಯನ ಕಾರ ತೆಗೆದುಕೊಂಡು ಹೋಗಿದ್ದರೆನ್ನಲಾಗಿದೆ.
ಸ್ಥಳಕ್ಕೆ ಚಿತ್ತಾಕುಲ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.