ಕಾರವಾರ: ಮನೆಗೆ ಚರ್ಚ್ ಎಂದು ಬೋರ್ಡ್ ಹಾಕಿಸಿ ಹಿಂದುಗಳನ್ನು ಮತಾಂತರ ಮಾಡಿಸುತ್ತಿದ್ದಾರೆಂದು ಆರೋಪಿಸಿದ ಹಿಂದು ಸಂಘಟನೆಯವರು ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಗುನಗಿವಾಡದಲ್ಲಿರುವ ಮನೆಯೊಂದನ್ನು ಅನಧಿಕೃತ ಚರ್ಚ್ ಮಾಡಲಾಗಿದೆ. ಮನೆ ಹೊರಗೆ ಬ್ರೈಟ್ ಮಾರ್ನಿಂಗ್ ಸ್ಟಾರ್ ಚರ್ಚ್ ಎಂದು ಬರೆದಿರುವ ಬೋರ್ಡ್ ಹಾಕಿಸಲಾಗಿದೆ. ಹಾಗು ಇಲ್ಲಿಅನ್ಯ ಧರ್ಮವರನ್ನು ಕರೆಯಿಸಿ ಆಮಿಷವೊಡ್ಡಿ ಧರ್ಮಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ. ಹಿಂದುಗಳಿಂದ ಅನ್ಯಧರ್ಮದ ಪ್ರಾರ್ಥನೆ ಮಾಡಿಸಲಾಗುತ್ತಿದೆ.
ಪರವಾನಗಿ ಇಲ್ಲದಿದ್ದರೂ ಮನೆಯಲ್ಲಿಯೇ ಚರ್ಚ್ ಹೆಸರಿನಲ್ಲಿ ಪ್ರಾರ್ಥನಾ ಮಂದಿರ ಆರಂಭಿಸಲಾಗಿದೆ.
ಪ್ರಾರ್ಥನೆ ಹೆಸರಿನಲ್ಲಿ ಅನ್ಯಧರ್ಮೀಯರನ್ನು ಮತಾಂತರ ಮಾಡಿಸಲಾಗುತ್ತಿದೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುತ್ತಿದೆ ಹಾಕಿ ಅನಧಿಕೃತ ಚರ್ಚ್‌ಗೆ ವಿರೋಧ ವ್ಯಕ್ತಪಡಿಸಿದರು.
ಇಲ್ಲಿ ಪ್ರಾರ್ಥನೆ ಮಾಡುವುದರಿಂದ ರೋಗ ವಾಸಿಯಾಗುತ್ತದೆ. ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬಿತ್ಯಾದಿ ಆಮಿಷ ತೋರಿಸಿ ಜನರನ್ನು ಕರೆತರಲಾಗುತ್ತದೆ. ಹಿಂದು ಸಂಘಟನೆಯವರು ಮುತ್ತಿದೆ ಹಾಕಿದ ಸಂಧರ್ಭದಲ್ಲಿ ಮನೆಯೊಳಗೆ 50ಕ್ಕೂ ಅಧಿಕ ಅನ್ಯಧರ್ಮಿಯರೊಂದಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.
ಕಳೆದ ಹಲವು ದಿನಗಳಿಂದ ಮನೆಯಲ್ಲಿಯೇ ಅನಧಿಕೃತ ಚರ್ಚ್ ನಡೆಸಲಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನಲೆಯಲ್ಲಿ ಮುತ್ತಿಗೆ ಹಾಕಿ ವಿರೋಧಿಸಲಾಗಿದೆ ಎಂದು ಹಿಂದೂ ಸಂಘಟನೆ ಸದಸ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಠಾಣೆಗೆ ಆಗಮಿಸಿ ದೂರು ನೀಡುವಂತೆ ಹಿಂದೂ ಸಂಘಟನೆ ಸದಸ್ಯರಿಗೆ ಸೂಚಿಸಿದ್ದಾರೆ.