ಮಹಾರಾಷ್ಟ್ರದಿಂದ ತಂದ 2.73 ಕೋಟಿ ರು. ಕರ್ನಾಟಕ ಪೊಲೀಸರ ವಶ
ಮಹಾರಾಷ್ಟ್ರದಿಂದ ತಂದ 2.73 ಕೋಟಿ ರು. ಕರ್ನಾಟಕ ಪೊಲೀಸರ ವಶ
ಮಹಾರಾಷ್ಟ್ರದಿಂದ ಅಕ್ರಮವಾಗಿ ಕರ್ನಾಟಕ್ಕೆ ಗುಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 2.73 ಕೋಟಿ ಹಣವನ್ನು ಕರ್ನಾಟಕ ರಾಜ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿಗೆ ಗೂಡ್ಸ ವಾಹನದಲ್ಲಿ ಕ ಸಾಗಿಸುತ್ತಿದ್ದ 2.73 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ಗೂಡ್ಸ ವಾಹನವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮವಾಗಿ ಹಣ ಸಾಗಿಸಲೆಂದೇ ಗೂಡ್ಸ್ ವಾಹನಕ್ಕೆ ಪ್ರತ್ಯೇಕ ಕ್ಯಾಬಿನ್ ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಬಂಧಿತರನ್ನು ಮಹಾರಾಷ್ಟ್ರದ ಸಾಂಗ್ಲಿಯ ಸಚಿನ ಮೇನಕುದಳೆ ಹಾಗೂ ಮಹಾರಾಷ್ಟ್ರದ ಮಾರುತಿ ಮಾರಗುಡೆ ಎಂದು ಗುರುತಿಸಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ನಂದೀಶ್ವರ ಕುಂಬಾರ ಹಾಗೂ ತಂಡವು ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಅಶೋಕ ಲೇಲ್ಯಾಂಡ್ ಗೂಡ್ಸ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದೇ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಣ ಯಾರಿಗೆ ಸೇರಿದ್ದು ಎಂಬುವುದು ತಿಳಿದು ಬಂದಿಲ್ಲ. ಹವಾಲಾ ಹಣ ಇರಬಹುದೆಂದು ಶಂಕಿಸಲಾಗಿದೆ.