Crime

ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಜಪ್ತಿ

ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಜಪ್ತಿ

ಕಾರವಾರ: ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದರೂ ಸಹ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಹಿನ್ನಲೆ ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್, ಹಿರಿಯ ಆರೋಗ್ಯ ನಿರೀಕ್ಷಕ ಯಾಕೂಬ ಶೇಖ್, ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಎಮ್ ಶೆಟ್ಟಿ, ದ್ವಿದಸ ಸಂತೋಷ್ ಗೋವೆಕರ ಹಾಗೂ ಕಾರವಾರ ನಗರಸಭೆ ಸ್ವಚ್ಛತಾ ಮೇಲ್ವಿಚಾರಕರು ಇವರುಗಳೊಂದಿಗೆ ಹಠಾತ್ ದಾಳಿ ನಡೆಸಲಾಯಿತು.

ನಿಷೇಧಿತ ಪ್ಲಾಸ್ಟಿಕ್ ಮಾರಾಟವನ್ನು ತಡೆಗಟ್ಟಲು ಅಂಗಡಿಗಳು, ಹೋಲ್ ಸೆಲ್ ಶಾಪ್, ಹೂ ಹಣ್ಣು ಮಾರಾಟಗಾರರು, ಕಿರಾಣಿ ಅಂಗಡಿ, ಬೇಕರಿ ಸೇರಿ ಸುಮಾರು 25 ಅಂಗಡಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪ್ಲಾಸ್ಟಿಕ್ ಕಪ್, ಸ್ಪೂನ್ ಮತ್ತು ಕ್ಯಾರಿಬ್ಯಾಗ್ ಇತ್ಯಾದಿಗಳನ್ನೊಳಗೊಂಡು 72 ಕೆಜಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅಂಗಡಿ ಮಾಲೀಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ 6,200 ರೂಪಾಯಿ ದಂಡವನ್ನು ವಿಧಿಸಲಾಯಿತು.

ಸದರಿ ಪ್ರದೇಶಗಳ ವ್ಯಾಪಾರಿಗಳಲ್ಲಿ ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ನಿಷೇದಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು ಉಪಯೋಗಿಸದಂತೆ ಜಾಗೃತಿ ಮೂಡಿಸಿ, ಕೇವಲ ಬಟ್ಟೆ ಚೀಲಗಳನ್ನು ಬಳಸುವಂತೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!