ಕಾರವಾರ: ತಾಲ್ಲೂಕಿನ ಕದ್ರಾ ವನ್ಯಜೀವಿ ಅರಣ್ಯ ವಲಯ ವ್ಯಾಪ್ತಿಯ ಲಾಂಡೆ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರ ಮೇಲೆ ಮೂರು ಕರಡಿಗಳು ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಸ್ವರೂಪದಲ್ಲಿ ಗಾಯ ಗೊಳಿಸಿವೆ.
ಲಾಂಡೆ ಗ್ರಾಮದ ಅರ್ಜುನ ಪೂನೊ ವೆಳಿಪ (75) ಗಾಯಗೊಂಡ ವ್ಯಕ್ತಿ. ಕೃಷಿ ಕೆಲಸಕ್ಕೆ ಅರಣ್ಯ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಕರಡಿ ಮತ್ತು ಅದರ ಎರಡು ಮರಿಗಳು ದಾಳಿ ನಡೆಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಕರಡಿಗಳು ದಾಳಿ ನಡೆಸಿದ ರಭಸಕ್ಕೆ ಅರ್ಜುನ ಅವರ ಮುಖದ ಭಾಗ ಛಿದ್ರಗೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕದ್ರಾ ಠಾಣೆ ಪೊಲೀಸರು ತಿಳಿಸಿದ್ದಾರೆ.