ಕಾರವಾರ: ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಕಣ ರೈಲ್ವೇ ಅ.30ರಂದು ಬೆಂಗಳೂರು-ಕಾರವಾರ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ.
ಅ.31ರಂದು ಕಾರವಾರದಿಂದ ರೈಲು (06598) ಮಧ್ಯಾಹ್ನ 12 ಗಂಟೆಗೆ ಹೊರಟು ಮಾರನೆ ದಿನ ಬೆಳಗ್ಗೆ 4ಕ್ಕೆ ಬೆಂಗಳೂರು ತಲುಪುವುದು.
ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ (ಬೈಂದೂರು), ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್ ಹಾಗೂ ಅಂಕೋಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ.ರೈಲಿನಲ್ಲಿ 10 ಸ್ಲೀಪರ್, 4 ಜನರಲ್, ತಲಾ ಎರಡು ಎಸ್‌ಎಲ್‌ಆರ್ ಮತ್ತು ಎಸಿ ಸಹಿತ 18 ಬೋಗಿಗಳು ಇರಲಿವೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.
ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗ ಳೂರು ಜಂಕ್ಷನ್‌ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.