ಕಾರವಾರ
ತಾಲೂಕಿನ ಗೋಟೆಗಾಳಿ ಗ್ರಾಪಂನಲ್ಲಿ ಸೋಮವಾರ ಗ್ರಾಮಸಭೆಯನ್ನು ಕರೆಯಲಾಗಿತ್ತು. ಆದರೆ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಆಗಮಿಸದ ಕಾರಣ ಸಾರ್ವಜನಿಕರು ಸಭೆಯನ್ನು ಬಹಿಸ್ಕರಿಸಿದರು.
ಪ್ರತಿಸಲವೂ ಸಭೆ ನಡೆದಾಗ ಇದೇ ರಿತಿ ಆಗುತ್ತದೆ. ಜನರ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಕಾಟಾಚಾರಕ್ಕೆ ಸಭೆಯನ್ನು ನಡೆಸಲಾಗುತ್ತಿದೆ. ಇಂದು ನಡೆದ ಸಭೆಗೆ ೨೭ ಕ್ಕೂ ಅಧಿಕ ಅಧಿಕಾರಿಗಳು ಗೈರಾಗಿದ್ದು , ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಾಗಲೇ ಬೇಕು ಎಂದು ಸಾಮಾಜಿಕಕಾರ್ಯಕರ್ತ ಉದಯ ನಾಗೇಶ ನಾಯ್ಕ ಆಗ್ರಹಿಸಿದರು. ಮುಂದಿನ ತಿಂಗಳು ೧೫ ರೊಳಗೆ ಸಭೆ ನಡೆಸುವುದಾಗಿ ಗ್ರಾಪಂ ಅಧಿಕಾರಿಗಳು ಭರವಸೆ ನೀಡಿದರು