ಕಾರವಾರ: ಸಂತೆ ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ತರಕಾರಿಗಳ ಮೇಲೆ ಎಂಜಲು ಉಗಿದು ಮಾರಾಟಕ್ಕೆ ಇಡುತ್ತಿದ್ದ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿದ ವ್ಯಾಪಾರಿಯಾಗಿದ್ದಾನೆ.
ಭಾನುವಾರದ ಸಂತೆ ಮಾರುಕಟ್ಟೆಗೆ ಸೊಪ್ಪು ತಂದಿದ್ದ ಅಬ್ದುಲ್ ಹಸನ್ ಸಾಬ್ ನಗರದ NKGSB ಬ್ಯಾಂಕ್ ಎದುರು ಮಾರಾಟಕ್ಕೆ ಕುಳಿತಿದ್ದ. ತಂದಿದ್ದ ಸೊಪ್ಪುಗಳಿಗೆ ನೀರು ಸಿಂಪಡಿಸಿ ಇಡುವ ವೇಳೆ ಎಂಜಲು ಉಗಿದು ಮಾರಾಟಕ್ಕೆ ಇಡುತ್ತಿದ್ದ. ಈ ದೃಶ್ಯವನ್ನು ಕಂಡ ಸ್ಥಳೀಯರು ಈ ವ್ಯಾಪಾರಿಯ ಹೇಯ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ವ್ಯಾಪಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾರಾಟದ ವೇಳೆ ಎಂಜಲು ಉಗಿದ ಸೊಪ್ಪು, ತರಕಾರಿಯನ್ನು ವ್ಯಾಪಾರಕ್ಕೆ ಇರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹೇಯ ಕೃತ್ಯ ಎಸಗುತ್ತಿದ್ದ ವ್ಯಾಪಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವ್ಯಾಪಾರಿಯ ಹೇಯ ಕೃತ್ಯದ ವೀಡಿಯೋ ವೈರಲ್ ಆಗಿದೆ. ಇಂತಹ ವ್ಯಾಪಾರಿಗಳಿಂದ ಯಾವುದೇ ತರಕಾರಿ, ಸೊಪ್ಪು ಖರೀದಿಸದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.