ಕಾರು ಪಲ್ಟಿ : ಸ್ಥಳದಲ್ಲೇ ಚಾಲಕ ಸಾವು
ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾದ ನ್ಯಾನೋ ಕಾರು : ಸ್ಥಳದಲ್ಲೇ ಚಾಲಕ ಸಾವು ವಧು ಅನ್ವೇಷಣೆಗೆ ಹೊರಟಿದ್ದ ಎನ್ನಲಾದ ಇನ್ನೋರ್ವ ಪ್ರಾಣಪಾಯದಿಂದ ಪಾರು.
ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾದ ನ್ಯಾನೋ ಕಾರು : ಸ್ಥಳದಲ್ಲೇ ಚಾಲಕ ಸಾವು
ವಧು ಅನ್ವೇಷಣೆಗೆ ಹೊರಟಿದ್ದ ಎನ್ನಲಾದ ಇನ್ನೋರ್ವ ಪ್ರಾಣಪಾಯದಿಂದ ಪಾರ
ಅಂಕೋಲಾ : ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ , ಇನ್ನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಬೆಳಿಗ್ಗೆ ಸಂಭವಿಸಿದೆ.
ಹೊನ್ನಾವರ ಕಡೆಯಿಂದ ಕುಮಟಾ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದ ವೇಳೆ ದಾರಿಮಧ್ಯೆ ಗಂಗಾವಳಿ ಸೇತುವೆ ದಾಟಿ ಕೊಡಸಣಿ ಕ್ರಾಸ್ ಬಳಿ ಬರುತ್ತಿದ್ದಂತೆ ಅಪಾಯಕಾರಿ ತಿರುವಿನಲ್ಲಿ ದನ ಅಡ್ಡ ಬಂದಂತಾಗಿ ಇಲ್ಲವೇ ಅದೇಗೋ ಚಾಲಕ ಕಾರ್ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಬಲ ಬದಿಯ ತಗ್ಗಿನಲ್ಲಿ ಕಾರು ಪಲ್ಟಿ ಪಡಿಸಿಕೊಂಡು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಸಿಡಿದು ಬಿದ್ದ ಎನ್ನಲಾಗಿದ್ದು ,ಅಪಘಾತದ ತೀವ್ರತೆಗೆ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಮೃತ ದುರ್ದೈವಿಯಾಗಿದ್ದಾನೆ . ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ಎನ್ನಲಾದ ದಿನೇಶ ಎನ್ನುವವನ ತಲೆ ಹಾಗೂ ಇತರೆಡೆ ಗಾಯನೋವುಗಳಾಗಿದ್ದು ಎನ ಎಚ್ ಎ ಐ ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.