ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳ ದಾಳಿ
ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳ ದಾಳಿ
ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳ ದಾಳಿ
ಶಿರಸಿ: ಜೇನು ಹುಳುಗಳ ದಾಳಿಗೆ 23ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶಿರಸಿಯ ಡೊನ್ ಬಾಸ್ಕೊ ಶಾಲೆಯಲ್ಲಿ ನಡೆದಿದೆ.
ಮದ್ಯಾಹ್ನದ ಸುಮಾರಿಗೆ ವಿದ್ಯಾರ್ಥಿಗಳು ಶಾಲೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಎಲ್ಲಿಂದಲೊ ಬಂದ ಜೇನು ಹುಳುಗಳು ಮಕ್ಕಳ ಮೇಲೆ ದಾಳಿ ನಡೆಸತೊಡಗಿತು. ಈ ಸಂದರ್ಭದಲ್ಲಿ ಮಕ್ಕಳು ನೋವು ತಡಿಯಲಾರದೇ ಚೀರುತ್ತ ಶಾಲೆಯ ಒಳಗೆ ಪ್ರವೇಶಿಸಿ ಬಾಗಿಲು ಕಿಟಕಿ ಹಾಕಿಕೊಂಡರೂ ವಿದ್ಯಾರ್ಥಿಗಳ ಬೆನ್ನ ಹಿಂದಯೇ ಹಿಂಡು ಹಿಂಡಾಗಿ ಬಂದಿದ್ದ ಜೇನುಹುಳುಗಳು ತರಗತಿಯ ಒಳಗೆ ಬರಲಾರಂಭಿಸಿತು. ಕೆಲವೊಂದು ತರಗತಿಗಳ ಒಳಗಿದ್ದ ಮಕ್ಕಳು ಜೇನು ದಾಳಿ ನಡೆಸಿರುವುದನ್ನು ಕಂಡು ಬಾಗಿಲು ಹಾಕಿಕೊಂಡಿದ್ದರಿಂದ ಹೊರಗಿನಿಂದ ಓಡಿ ಬಂದಿದ್ದ ಮಕ್ಕಳು ಪೇಚಾಟಕ್ಕೆ ಸಿಲುಕಿ ಬಹಳಷ್ಟು ಜೇನು ಹುಳುಗಳಿಂದ ಕಚ್ಚಿಸಿಕೊಳ್ಳಬೇಕಾಯಿತು.
ಈ ಸಂದರ್ಭದಲ್ಲಿ ಮಕ್ಕಳನ್ನು ಜೇನಿನಿಂದ ತಪ್ಪಿಸುವ ಪ್ರಯತ್ನದಲ್ಲಿ ಫಾದರ್ ಸಂದೇಶ ಸೇರಿದಂತೆ ಬಹಳಷ್ಟು ಶಿಕ್ಷಕರು ಜೇನು ಹುಳುವಿನ ದಾಳಿಗೆ ಒಳಗಾಗಬೇಕಾಯಿತು. ಜೇನಿನ ದಾಳಿಗೆ ಬೆಚ್ಚಿಬಿದ್ದಿದ್ದ ಇಡೀ ಶಾಲಾ ಮಕ್ಕಳಿಂದ ಕೇಳಿ ಬಂದ ಚಿರಾಟ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಜೇನಿನ ದಾಳಿ ಕ್ರಮೇಣವಾಗಿ ಕಡಿಮೆಯಾದಂತೆ ಶಿಕ್ಷಕರು ತಡಮಾಡದೇ ಮಕ್ಕಳನ್ನು ಅಂಬುಲೆನ್ಸ್ ಮೇಲೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಗೆ ಒಳಪಡಿಸಿದರು. ಒಂದೆರಡು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜೇನು ಕಚ್ಚಿದ್ದು ಬಿಟ್ಟರೆ ಉಳಿದೆಲ್ಲಾ ಮಕ್ಕಳು ಒಂದೆರಡು ಜೇನು ಹುಳುವಿನ ಕಡಿತಕ್ಕೊಳಗಾಗಿ ಪಾರಾಗಿದ್ದಾರೆ .ಪಿಎಸ್ಆಯ್ ರತ್ನಾಕುರಿ ಆಸ್ಪತ್ರಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.