Uncategorized

ಶೇಡಿಕುಳಿ ಕಡಲತೀರದಲ್ಲಿ ತಿಮಿಂಗಿಲದ ಕಳೆಬರಹ ಪತ್ತೆ

ಶೇಡಿಕುಳಿ ಕಡಲತೀರದಲ್ಲಿ ತಿಮಿಂಗಿಲದ ಕಳೆಬರಹ ಪತ್ತೆ

 

ಅಂಕೋಲಾ: ತಾಲೂಕಿನ ಶೇಡಿಕುಳಿ ಸಮುದ್ರ ತೀರದಲ್ಲಿ ಮಂಗಳವಾರ ಬೆಳಿಗ್ಗೆ ತಿಮಿಂಗಿಲದ ಕಳೆಬರಹ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಕಡಲತೀರದ ಬಳಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹವನ್ನು ಗಮನಿಸಿದ್ದು, ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಈ ತಿಮಿಂಗಿಲ ಸುಮಾರು ಒಂದು ವಾರದ ಹಿಂದೆ ಮರಣಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ದೊರಕಿದೆ. ಅರಣ್ಯ ಇಲಾಖೆಯವರು ಸ್ಥಳದಲ್ಲಿ ತಪಾಸಣೆ ನಡೆಸಿ, ತಿಮಿಂಗಿಲದ ಕಳೇಬರವನ್ನು ಸುರಕ್ಷಿತವಾಗಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ಈ ಘಟನೆಗೆ ಕಾರಣ ಮತ್ತು ತಿಮಿಂಗಿಲದ ಸಾವಿನ ಹಿನ್ನೆಲೆಯನ್ನು ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!