ಶಿರಸಿ: ಅಪ್ರಾಪ್ತ ಬಾಲಕಿಯ (೧೪) ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಶಿರಸಿ ಕಸ್ತೂರಬಾ ನಗರದ ಆರೋಪಿ ತೌಸಿಪ್ ಬೇಗ ಎಂಬಾತನ್ನನ್ನು ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಅತ್ಯಾಚಾರಗೊಳಗಾದ ಬಾಲಕಿ ಸಿದ್ದಾಪುರ ಮೂಲದವಳೆಂದು ಹೇಳಲಾಗಿದ್ದು ಆರೋಪಿಯು ಇನ್ಸ್ಟಾಗ್ರಾಮ್ ಮೂಲಕ ಪ್ರೀತಿಸಿ ನಂತರ ಸುಳ್ಳು ಹೇಳಿ ಅತ್ಯಾಚಾರ ಮಾಡಿದ್ದಾನೆಂದು ತಿಳಿದು ಬಂದಿದೆ.ಎಸ್ಪಿ ನಾರಾಯಣ,ಡಿವಾಯೆಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನ ಮತ್ತು ಸಿಪಿಆಯ್ ಶಶಿಕಾಂತ ವರ್ಮಾ ನೇತ್ರದಲ್ಲಿ ಪಿಎಸ್ಆಯ್ ರತ್ನಾ ಕುರಿ ತನಿಖೆ ನಡೆಸಿ ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.