Local

ದೋಣಿಯಲ್ಲಿಯೇ ಶವ ಸಾಗಿಸಿದ ದ್ವೀಪ ಗ್ರಾಮದ ಜನರು

ಸೇತುವೆ ಇದ್ದರೂ ರಸ್ತೆ ಇಲ್ಲ, ಎರಡು ದೋಣಿಯಲ್ಲಿ ಶವ ಇಟ್ಟು ಅಂತ್ಯಕ್ರಿಯೆಗೆ ಸಾಗಿಸಲಾಯಿತು.

ಕಾರವಾರ:

ಸೇತುವೆ ನಿರ್ಮಾಣವಾಗಿದ್ದರೂ ರಸ್ತೆ ನಿರ್ಮಾಣವಾಗದಿರುವುದರಿಂದ ಹೆಣ ಸಾಗಿಸಲು ಪರದಾಡುವಂತಾಯಿತು. ಇದು ದ್ವೀಪ ಗ್ರಾಮದ ಜನರ ಗೋಳು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ದ್ವೀಪ ಗ್ರಾಮ ಉಮಳೆಜೂಗ್. ಈ ದ್ವೀಪ ಗ್ರಾಮದಲ್ಲಿ ಸುಮಾರು 40 ಮನೆಗಳಿವೆ. ‌ನಾಲ್ಕು ಬದುಯಿಂದ ಕಾಳಿ‌ನದಿ ಆವರಿಸಿರುವ ಈ ಗ್ರಾಮಕ್ಕೆ ಸಂಪರ್ಕಿಸಲು ದೋಣಿಯೇ ಸಾಧನವಾಗಿತ್ತು. ಆದರೆ ಇತ್ತಿಚೆಗೆ ಖಾರ್ಗೆಜೂಗ ಮತ್ತು ಉಂಬಳಿಜೂಗ ದ್ವೀಪ ಗ್ರಾಮಕ್ಕೆ ಸಂಪರ್ಕಿಸಲು ಸೇತುವೆ ನಿರ್ಮಿಸಲಾಗಿದೆ. ಆದರೆ ಸೇತುವೆಯಿಂದ ಗ್ರಾಮಕ್ಕೆ ತೆರಳಲು ರಸ್ತೆ ನಿರ್ಮಿಸಲಿಲ್ಲ. ಹೀಗಾಗಿ ಇಲ್ಲಿನ‌ ಜನರಿಗೆ ಏ
ಸೇತುವೆ ಇದ್ದರೂ ನದಿ ದಾಟಲು ದೋಣಿಯನ್ನೇ ಬಳಸಬೇಕಾಗಿದೆ. ಈ ಗ್ರಾಮದ ಜನರು ಆಸ್ಪತ್ರೆ ಅಥವಾ ಇನ್ನಿತರ ಕೆಲಸಕ್ಕಾಗಿ ಮುಖ್ಯ ರಸ್ತೆಗೆ ಬರಲು ದೋಣಿಯೇ ಸಂಪರ್ಕಕೊಂಡಿಯಾಗಿದೆ. ಇಲ್ಲಿನ ಅನೇಕರು ಉದ್ಯೋಗ ಆರಿಸಿ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಆದರೆ ಜಾತ್ರೆ, ಹಬ್ಬ ,ಅಥವಾ ಯಾವುದೇ ಕಾರ್ಯಕ್ಕೆ ಸ್ವ ಊರಿಗೆ ಬರಲೇಬೇಕು. ಒಂದು ವೇಳೆ ಬೇರೆ ಸ್ಥಳದಲ್ಲಿ ಸಾವು ಸಂಭವಿಸಿದ್ದರೂ ಅಂತ್ಯ ಸಂಸ್ಕಾರಕ್ಕೆ ಸ್ವ ಊರಿನ ಸ್ವಂತ ಮೂಲ ಮನೆಗೆ ತರಲೇಬೇಕು. ಹೆಣ ತರಲೂ ಕೂಡ ಇಲ್ಲಿನವರಿಗೆ ದೋಣಿಯೇ ಗತಿ. ಮುಖ್ಯವಾಗಿ ಈ ಊರಿನಲ್ಲಿ ಸ್ಮಶಾನ ಭೂಮಿ ಇಲ್ಲ.‌ ಅಂತ್ಯ ಸಂಸ್ಕಾರಕ್ಕೆ ಬೇರೆ ಮಜಿರೆಗೆ ಶವ ಸಾಗಿಸಬೇಕಾಗುತ್ತದೆ. ಇಂತಹದೊಂದು ಘಟನೆ ಇಂದು ನಡೆದಿದ್ದು, ಎರಡು ದೋಣಿಗಳ ಮೂಲಕ‌ ಹೆಣ ಸಾಗಿಸಲಾಯಿತು. ಗ್ರಾಮದಲ್ಲಿ ಗುಲ್ಬಾ ಕೋಳಂಕರ್ ಹೆಸರಿನ ವ್ಯಕ್ತಿ ಸಾವನಪ್ಪಿದರು. ಆದರೆ ಶವ ಸಂಸ್ಕಾರಕ್ಕೆ ಕೊಂಡೊಯ್ಯಲು ದೋಣಿ ಬಳಸಬೇಕಾಯಿತು. ನದಿಗೆ ಸೇತುವೆ ಇದ್ದರೂ ರಸ್ತೆ ನಿರ್ಮಾಣವಾಗದೆ ಇರುವುದರಿಂದ ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ. ಇದು ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!