Uncategorized
ಪಕ್ಕದ ಮನೆಗೇ ಕನ್ನ ಹಾಕಿದ್ದ ಐನಾತಿ ನೆರೆಮನೆಯಾತ ಅರೆಸ್ಟ್!
ಪಕ್ಕದ ಮನೆಗೇ ಕನ್ನ ಹಾಕಿದ್ದ ಐನಾತಿ ನೆರೆಮನೆಯಾತ ಅರೆಸ್ಟ್!
ಸಿದ್ದಾಪುರ: ಪಕ್ಕದ ಮನೆಗೆ ಕನ್ನ ಹಾಕಿ 1.26 ಲಕ್ಷ ಮೌಲ್ಯದ 21 ಗ್ರಾಂ ಚಿನ್ನ ಕದ್ದಿದ್ದ ತಾಲ್ಲೂಕಿನ ಬೇಡ್ಕಣಿಯ ಗಣೇಶ್ ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮನೆಯ ಪಕ್ಕದಲ್ಲೇ ಇರುವ ಬೇಡ್ಕಣಿಯ ಠಾಣೆಗೇರಿಯ ಜಯಂತ್ ರಾಮಾ ನಾಯ್ಕ ಎಂಬುವವರ ಮನೆಗೆ ಬೀಗ ಮುರಿದು ಕನ್ನಹಾಕಿ ಬಂಗಾರ ದೋಚಿ ಪರಾರಿಯಾಗಿದ್ದ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಚಿನ್ನಾಭರಣ ಸಮೇತ ಈತನನ್ನು ಬಂಧಿಸಿದ್ದಾರೆ. ಈತನಿಂದ 21 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.
ಈ ಹಿಂದೆ ಊರಿನಲ್ಲಿ ಚಿಕ್ಕಪುಟ್ಟ ಕಳ್ಳತನ ಮಾಡುತಿದ್ದ ಈತ ಬೆಂಗಳೂರು ಸೇರಿದ್ದ. ಊರಿನವರೂ ಉದ್ದಾರ ಆಗ್ತಾನೆ ಎಂದು ತಿಳಿದು ಚಿಕ್ಕಪುಟ್ಟ ತಪ್ಪುಗಳನ್ನು ಕ್ಷಮಿಸಿದ್ದರು. ಆದರೆ ಇದೀಗ ದೊಡ್ಡ ಅಪರಾಧ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.