Uncategorized
ಸತೀಶ್ ಕೋಳಂಕರ್ ಕೊಲೆ ಆರೋಪಿಗೆ ಪೊಲೀಸರಿಂದ ಗುಂಡೇಟು
ಸತೀಶ್ ಕೋಳಂಕರ್ ಕೊಲೆ ಆರೋಪಿಗೆ ಪೊಲೀಸರಿಂದ ಗುಂಡೇಟು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಪ್ರದೇಶದಲ್ಲಿ ಕಳೆದ ಏಪ್ರಿಲ್ 20ರಂದು ನಡೆದಿದ್ದ ಮಾಜಿ ನಗರಸಭಾ ಸದಸ್ಯ ಸತೀಶ್ ಕೋಳಂಕರ್ ಕೊಲೆ ಪ್ರಕರಣದ ಆರೋಪಿ ನಿತೀಶ್ ತಾಂಡೇಲ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ನಿತೀಶ್ ತಾಂಡೇಲ್ ಎಂಬುವವನು ಹಣಕಾಸಿನ ವಿವಾದದಿಂದ ಸತೀಶ್ ಕೋಳಂಕರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಇಂದು ಪಂಚನಾಮೆ ನಡೆಸುವ ಸಮಯದಲ್ಲಿ ಆರೋಪಿ ನಿತೀಶ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಅವನು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ, ರಕ್ಷಣೆಗಾಗಿ ಪಿಎಸ್ಐ ಕುಮಾರ್ ಕಾಂಬ್ಳೆ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಈ ಘಟನೆಯಲ್ಲಿ ಆರೋಪಿ ನಿತೀಶ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ್ ಸೇರಿದಂತೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.