ಗೋಕರ್ಣ : ಸಿಡಿಲು ಬಡಿದು ನಾಲ್ವರು ಗಾಯಗೊಂಡಿರುವ ಘಟನೆ ಗೋಕರ್ಣ ವಾರದ ಸಂತೆಯಲ್ಲಿ ಗುರುವಾರ ಸಂಜೆ ನಡೆದಿದೆ.
ಸಂಜೆ ಅಂಧರ್ಭದಲ್ಲಿ ಮಳೆ ಬೀಳಲಾರಂಭಿಸಿದ್ದರಿಂದ ಕೆಲವರು ಮರದ ಕೆಳಗೆ ನಿಂತಿದ್ದರು. ಈ ಸಂರ್ಭದಲ್ಲಿ ಸಿಡಿಲು ಬಡಿದಿದೆ.
ವಾರದ ಸಂತೆಯಲ್ಲು ತರಕಾರಿ ಖರೀದಿಗೆ ಹೋದ ಹೊರ ರಾಜ್ಯದ ಮೂವರು ಕಾರ್ಮಿಕರು
ಓರ್ವ ಸ್ಥಳೀಯ ಬಿದ್ರ ಗೇರಿ ವ್ಯಕ್ತಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವ್ಯದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.