ಮ್ಯಾಕ್ಸ್ ಮಾಲ್, ಡೊಮಿನೋಸ್ ಮಳಿಗೆ ಮುಂದೆ ಹೊಡೆದಾಟ ; ವಿಡಿಯೋ ವೈರಲ್
ಮ್ಯಾಕ್ಸ್ ಮಾಲ್, ಡೊಮಿನೋಸ್ ಮಳಿಗೆ ಮುಂದೆ ಹೊಡೆದಾಟ ; ವಿಡಿಯೋ ವೈರಲ್

ಕಾರವಾರ : ನಗರದ ಮ್ಯಾಕ್ಸ್ ಮಾಲ್ ಮುಂಭಾಗದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದಿರುವ ಒಡೆದಾಟದ ಸಿಸಿ ಟಿವಿ ಪುಟೇಜ್ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದರೂ ಇನ್ನೂ ಪೊಲೀಸ್ ಪ್ರಕರಣ ದಾಖಲಾಗಿಲ್ಲದಿರುವುದು ಕೆಲವು ಊಹಾಪೋಹಗಳಿಗೆ ಕಾರಣವಾಗಿದೆ.
ಕಾರವಾರ ನಗರದ ಹಬ್ಬುವಾಡಾ ರಸ್ತೆಯಲ್ಲಿರುವ ಮ್ಯಾಕ್ಸ್ ಮಾಲ್ ಮತ್ತು ಡೊಮಿನೋಸ್ ಮಳಿಗೆ ಮುಂಭಾಗದ ಆವರಣದಲ್ಲಿ ಮಂಗಳವಾರ ರಾತ್ರಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಚಿತ್ರಣವಾಗಿದೆ. ಓರ್ವ ವ್ಯಕ್ತಿ ಸುಮಾರು 50 ವರ್ಷ ವಯಸ್ಸಿನವರಾಗಿದ್ದು ಹಾಫ್ ಪ್ಯಾಂಟ್ ಧರಿಸಿದ್ದಾರೆ. ಹಾಗು ಇನ್ನೋರ್ವ ಯುವಕನಾಗಿದ್ದು ಇಬ್ಬರ ನಡುವೆ ಮೊದಲು ಯಾವುದೋ ಕಾರಣಕ್ಕೆ ವಾದ ಆರಂಭಗೊಂಡಿದೆ. ವಾದ ನಡೆಯುತ್ತಿರುವಾಗಲೇ ಹಾಫ್ ಪ್ಯಾಂಟ್ ಧರಿಸಿದ ವ್ಯಕ್ತಿಯನ್ನು ಯುವಕ ದೂಡಿದ್ದಾನೆ. ಇದಕ್ಕೆ ಆ ವ್ಯಕ್ತಿ ನೆಲದ ಮೇಲೆ ಬಿದ್ದಿದ್ದಾರೆ. ಹಾಗು ಎದ್ದು ಯುವಕನ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ ಇನ್ನಷ್ಟು ಕ್ರೋಧಿತನಾದ ಯುವಕ ಆ ವ್ಯಕ್ತಿಯನ್ನು ಹೊಡೆದು ಬಿಳಿಸಿ ಮೂಗಿನ ಮೇಲೆ ಮುಷ್ಟಿಯಿಂದ ಏಟು ನೀಡಿದ್ದಾನೆ. ಇದರಿಂದ ತೀರ್ವಗಾಯಗೊಂಡ ಆ ವ್ಯಕ್ತಿ ಈಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು ಮೂಗಿನ ಮೂಳೆ ಮುರಿದಿರುವುದಾಗಿ ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆಂದು ಆ ವ್ಯಕ್ತಿಯ ಸಂಭಧಿಕರು ಮಾಹಿತಿ ನೀಡಿದ್ದಾರೆ.
ಈ ಎಲ್ಲ ಘಟನೆ ನಡೆದಿರುವ ಬಗ್ಗೆ ಸಿಸಿ ಕ್ಯಾಮೆರಾ ಪುಟೇಜ್ ಕೆಲವರ ವ್ಹಾಟ್ಸ್ ಆಪ್ ಗ್ರುಪ್ ಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹಾಗು ಹಲ್ಲೆ ಮಾಡಿದ ಯುವಕನ್ನು ಠಾಣೆಗೆ ಕರೆತರುವುದಾಗಿಯೂ ತಿಳಿಸಿದ್ದಾರೆ. ಆದರೆ ಇನ್ನೂ ಕೂಡ ಎಫ್ಐಆರ್ ದಾಖಲಾಗಿಲ್ಲ. ಅಲ್ಲದೇ ಆ ಯುವಕನ್ನು ಬಂಧಿಸಿಲ್ಲ ಎಂಬುವುದು ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.