ಜಾನುವಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್!
ಕಾರವಾರ: ತಾಲೂಕಿನ ತೋಡೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ರಾತ್ರಿ ಜಾನುವಾರೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಗೋವಾ ರಾಜ್ಯದ ವಾಸ್ಕೋ ಮೂಲದ ಆಯೀಶ ಅನಂತ ಗಡೇಕರ ಅಪಘಾತಕ್ಕೀಡಾದ ಬೈಕ್ ಸವಾರ. ಇವರು ಅಂಕೋಲಾ ಕಡೆಯಿಂದ ಕಾರವಾರದ ಕಡೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ತೋಡೂರು ಬಳಿ ಹೆದ್ದಾರಿಯಲ್ಲಿ ಜಾನುವಾರು ಅಡ್ಡ ಬಂದಿದ್ದು ಬೈಕ್ ನಿಯಂತ್ರಿಸಲಾಗದೇ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಬೈಕ್ ಸಾಕಷ್ಟು ದೂರ ಜರಿದುಕೊಂಡು ಹೋಗಿದೆ. ಬೈಕಿನಲ್ಲಿ ಸಾಕಷ್ಟು ಪೆಟ್ರೋಲ್ ಇದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ.
ಘಟನೆಯಲ್ಲಿ ಸವಾರ ಬಚಾವಾವಿದ್ದು ಬೈಕ್ ಹೊತ್ತಿ ಉರಿದಿದೆ. ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.