ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ಆಯೋಜನೆ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ಆಯೋಜನೆ

ಕಾರವಾರ: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಫೆ.19 ರಂದು ನಗರದಲ್ಲಿ ಬೃಹತ್ ಮೆರವಣಿಗೆ ಹಾಗೂ ನಗರಸಭೆ ಉದ್ಯಾನವನದಲ್ಲಿರುವ ಪುತ್ತಳಿಗೆ ಹಾಲಿನ ಅಭಿಷೇಕ ಮಾಡಿ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಮಾಜಿ ನಗರಸಭಾ ಸದಸ್ಯ ಸತೀಶ ಕೊಳಂಬಕರ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಭಗತ್ ಸಿಂಗ್ ಸೇನೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಕಮಿಟಿವತಿಯಿಂದ ಛತ್ರಪತಿ ಶಿವಾಜಿ ಮಹರಾಜರ ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ನಗರಸಭೆ ಬಳಿಯ ಉದ್ಯಾನವನದಲ್ಲಿ ಬೆಳಿಗ್ಗೆ 9.30 ಪುತ್ತಳಿಗೆ ಪೂಜೆ ಮಾಡಿ ಹಾಲಿನ ಅಭಿಷೇಕ ಮಾಡಲಾಗುವುದು. ಮಧ್ಯಾಹ್ನ 3.30 ಗಂಟೆಗೆ ಬಾಡದ ಮಹಾದೇವ ದೇವಸ್ಥಾನದಿಂದ ಬೃಹತ್ ಬೈಜ್ ರ್ಯಾಲಿ ನಡೆಸಲಾಗುವುದು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿದರು.
ಈ ವೇಳೆ ಮನೋಜ್ ನಾಯ್ಕ, ಓಂಕಾರ್ ಅಂಕೋಲೆಕರ್, ಪ್ರಶಾಂತ, ಸಿದ್ದಾರ್ಥಪೆಡ್ನೇಕರ್, ಸಂತೋಷ ನಾಯ್ಕ, ಸೂರ್ಯಕಾಂತ ಕಳಸ, ಗಜಾನನ ನಾಯ್ಕ, ಗಣೇಶ ನಾಯರ್ ಇದ್ದರು.