Uncategorized
ಭಟ್ಕಳದ ಜಾಲಿ ಕಡಲತೀರಕ್ಕೆ ತೇಲಿಬಂದ ‘ಕೊಚಿನ್ ಬಾರ್ಜ್’!
ಭಟ್ಕಳದ ಜಾಲಿ ಕಡಲತೀರಕ್ಕೆ ತೇಲಿಬಂದ 'ಕೊಚಿನ್ ಬಾರ್ಜ್'!

ಭಟ್ಕಳ: ತಾಲೂಕಿನ ಜಾಲಿ ಕಡಲತೀರದಲ್ಲಿ ಬಾರ್ಜ್ ಒಂದು ತೇಲಿ ಬಂದ ಘಟನೆ ನಡೆದಿದೆ. “ಕೊಚಿನ್ ಶಿಪ್ ಯಾರ್ಡ್” ಎಂದು ಬರೆಯಲಾದ ಬಾರ್ಜ್ ವಾಣಿಜ್ಯ ಹಡಗಿಗೆ ಸೇರಿದ್ದಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸ್ಥಳೀಯರ ಮಾಹಿತಿಯಂತೆ, ಹಡಗಿನ ರೋಪ್ ತುಂಡಾಗಿ ಈ ಬಾರ್ಜ್ ಸಮುದ್ರದಲ್ಲಿ ತೇಲಿ ಬಂದಿರಬಹುದು ಎನ್ನಲಾಗಿದೆ. ಈ ಸಂಬಂಧ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಬಾರ್ಜ್ ಎಲ್ಲಿಂದ ತೇಲಿ ಬಂದಿದೆ ಮತ್ತು ಅದರ ಮಾಲೀಕರು ಯಾರು ಎಂಬ ಬಗ್ಗೆ ವಿವರಗಳನ್ನು ಪತ್ತೆಹಚ್ಚಲು ಕರಾವಳಿ ಕಾವಲುಪಡೆ ಸಿಬ್ಬಂದಿ ಮುಂದಾಗಿದ್ದಾರೆ.