ಓಂ ಬೀಚ್‌ನಲ್ಲಿ ಗೋವಾ ಮೂಲದ ಪ್ರವಾಸಿಗರ ರಕ್ಷಣೆ
ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದ ಪ್ರವಾಸಿಗರಿಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಇಲ್ಲಿನ ಓಂ ಬೀಚ್‌ನಲ್ಲಿ ನಡೆದಿದೆ. ಗೋವಾ ಮೂಲದ ಸಾರಂಗ(23) ಹಾಗೂ ಆದಿತ್ಯ ಬುಧೌಕರ್(24) ರಕ್ಷಣೆಗೊಳಗಾದ ಪ್ರವಾಸಿಗರು.
ವಿದೇಶದ ಸ್ನೇಹಿತರೊಂದಿಗೆ ಗೋವಾದಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದು, ಮೂವರೂ ಸೇರಿ ಸಮುದ್ರದ ನೀರಿನಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರ ಹೆಚ್ಚಾಗಿ ಸಮುದ್ರದಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದು, ಪ್ರವಾಸಿಗರನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಪ್ರಾಣದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ಪ್ರವಾಸಿಗರ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರಾದ ಶುಕ್ರು ಗೌಡ, ವೆಂಕಟರಮಣಗೌಡ ಹಾಗೂ ಕೆಎನ್‌ಡಿ ಸಿಬ್ಬಂದಿ ರಾಜು ಗೋವೇಕರ್ ಸಹಾಯ ಮಾಡಿದ್ದಾರೆ.